Ration Card Update: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ ಇನ್ನು ಮುಂದೆ ರೇಷನ್ ಮಾರಿದರೆ ರದ್ದಾಗುತ್ತದೆ ರೇಷನ್ ಕಾರ್ಡ್! ಇಲ್ಲಿದೆ ಮಾಹಿತಿ.
ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಸ್ನೇಹಿತರೆ ಈಗ ನೀವು ಪಡೆದುಕೊಳ್ಳುವಂತಹ ಪಡಿತರ ಅಂದರೆ ರೇಷನ್ ಅನ್ನು ಒಂದು ವೇಳೆ ನೀವೇನಾದರೂ ಮಾರಾಟ ಮಾಡಿದರೆ ನಿಮ್ಮ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಮಾಹಿತಿ ಎಲ್ಲಡೆ ಹರಿದಾಡುತ್ತಿದೆ. ಇದರ ಬಗ್ಗೆ ಈಗ ಸ್ಪಷ್ಟ ಮಾಹಿತಿ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.
ಈಗಾಗಲೇ ನಿಮಗೆ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರ ಪ್ರತಿಯೊಬ್ಬರಿಗೂ ಕೂಡ 5 ಕೆಜಿ ಅಕ್ಕಿ ಹಣವನ್ನು ರೇಷನ್ ಕಾರ್ಡ್ ನಲ್ಲಿರುವಂತಹ ಮುಖ್ಯಸ್ಥ ಮಹಿಳೆಯರ ಖಾತೆಗಳಿಗೆ ಈಗಾಗಲೇ ಸರ್ಕಾರವು ಜಮಾ ಮಾಡುತ್ತಾ ಬಂದಿದೆ. ಆದರೆ ಈಗ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಕೆಲವೊಂದು ಅಪ್ಡೇಟ್ ಗಳನ್ನು ಸರ್ಕಾರವು ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇದೆ.
ರೇಷನ್ ಕಾರ್ಡ್ ನ ಮಾಹಿತಿ
ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರ್ಕಾರವು ಈಗಾಗಲೇ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅವುಗಳಲ್ಲಿ ಈಗ ಅನ್ನ ಭಾಗ್ಯ ಯೋಜನೆಯು ಕೂಡ ಒಂದು. ಈಗ ಈ ಒಂದು ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಈಗ ಸರ್ಕಾರವು ಹೇಳಿರುವಂತ ಮಾಹಿತಿ ಪ್ರಕಾರ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿತ್ತು. ಆದರೆ ಈಗ ಅಕ್ಕಿಯ ಆಭಾವದಿಂದಾಗಿ ಸರ್ಕಾರವು 5 ಕೆಜಿ ಅಕ್ಕಿ ಹಾಗೂ ಇನ್ನೂ 5 ಕೆಜಿ ಅಕ್ಕಿಯ ಹಣವನ್ನು ರೇಷನ್ ಕಾರ್ಡ್ ನಲ್ಲಿರುವಂತಹ ಮಹಿಳೆಯ ಮುಖ್ಯಸ್ಥರ ಖಾತೆಗಳಿಗೆ ಈಗಾಗಲೇ ಸರ್ಕಾರ ಹಣವನ್ನು ಜಮಾ ಮಾಡುತ್ತಾ ಬಂದಿತ್ತು.
ಆದರೆ ಈಗ ಸರ್ಕಾರವು ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಮತ್ತಷ್ಟು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಫೆಬ್ರವರಿ ತಿಂಗಳಿನವರೆಗೆ ಈ ಒಂದು ಅನ್ನಭಾಗ್ಯ ಯೋಜನೆಯ ಸಂಬಂಧಪಟ್ಟಂತಹ ಹಣವನ್ನು ಈಗಾಗಲೇ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ಈಗ ಇನ್ನು ಮುಂದೆ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಬರುವಂತಹ ಹಣವನ್ನು ಈಗ ಬಂದ್ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಮುಂದೆ ಸ್ನೇಹಿತರೆ ಹಣದ ಬದಲಾಗಿ ಅಕ್ಕಿಯನ್ನು ನೀಡುವಂತಹ ಯೋಜನೆಯನ್ನು ಈಗ ಸರ್ಕಾರವು ಮಾಡಿದೆ.
ಹಾಗೆ ಸ್ನೇಹಿತರೆ ಈಗ ಫೆಬ್ರವರಿ ತಿಂಗಳಿಗೆ ಸಂಬಂಧಿಸಿದಂತ 5 ಕೆಜಿ ಅಕ್ಕಿಯನ್ನು ಮಾರ್ಚ್ ತಿಂಗಳ ಪಡಿತರ ವಿತರಣೆಯಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಸರ್ಕಾರವು ನೀಡಿದೆ. ಅದೇ ರೀತಿಯಾಗಿ ಸ್ನೇಹಿತರೆ ಈಗ ಅಂತೋದಯ ರೇಷನ್ ಕಾರ್ಡನ್ನು ಹೊಂದಿದಂತಹ ಪಡಿತರ ಚೀಟಿಯಲ್ಲಿ ಒಬ್ಬ ಮತ್ತು ಇಬ್ಬರು ಅಥವಾ ಮೂರು ಜನ ಸದಸ್ಯರು ಇದ್ದಾರೆ ಅವರಿಗೆ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಅದೇ ರೀತಿಯಾಗಿ ನಾಲ್ಕು ಮತ್ತು ಐದು ಜನ ಸದಸ್ಯರು ಇದ್ದರೆ ಅವರಿಗೆ 65 ಕೆಜಿಗಳವರೆಗೆ ಈ ಒಂದು ಪಡಿತರವನ್ನು ನೀಡಲಾಗುತ್ತದೆ.
ಹಾಗೆ ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಪಡಿತರವನ್ನು ತೆಗೆದುಕೊಂಡು ಮಾರಾಟ ಮಾಡಿದ್ದೆ. ಆದರೆ ನಿಮ್ಮ ರೇಷನ್ ಕಾರ್ಡನ್ನು ಸರ್ಕಾರವು ಕಡ್ಡಾಯವಾಗಿ ರದ್ದು ಮಾಡಲು ಈಗ ತೀರ್ಮಾನವನ್ನು ತೆಗೆದುಕೊಂಡಿದೆ. ಆದಕಾರಣ ನೀವು ಕೂಡ ರೇಷನ್ ಅನ್ನು ಪಡೆದುಕೊಂಡು ಯಾವುದೇ ಕಾರಣಕ್ಕೂ ಮಾರಾಟವನ್ನು ಮಾಡಬೇಡಿ. ಒಂದು ವೇಳೆ ನೀವು ಮಾರಾಟವನ್ನು ಮಾಡಿದ್ದೆ ಆದರೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಒಂದು ಬಾರಿ ನೀವು ರೇಷನ್ ಅನ್ನು ಮಾಡುವಂತ ಸಮಯದಲ್ಲಿ ಯೋಚನೆ ಮಾಡಿ ಮಾರಾಟ ಮಾಡುವುದು ಉತ್ತಮ.