SBI Pre Approved Personal Loan: ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಸಮಯದಲ್ಲಿ 15 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತೆ.!

SBI Pre Approved Personal Loan: ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಕಡಿಮೆ ಸಮಯದಲ್ಲಿ 15 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತೆ.!

ನಮಸ್ಕಾರ ಕರ್ನಾಟಕದ ಜನತೆಗೆ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಕಡಿಮೆ ಸಮಯದಲ್ಲಿ 15 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಇದನ್ನು ಎಸ್‌ಬಿಐ ಪೂರ್ವ ಅನುಮೋದಿತ ಸಾಲ ಎಂದು ಕೂಡ ಕರೆಯಲಾಗುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ. 

ಎಸ್‌ಬಿಐ ಪೂರ್ವ ಅನುಮೋದಿತ ವೈಯಕ್ತಿಕ ಸಾಲ:

ಹಣಕಾಸಿನ ಅಗತ್ಯತೆಗಳಿಗೆ ಅಂದರೆ ತುರ್ತು ಸಂದರ್ಭಗಳಲ್ಲಿ ಹಣದ ಅವಶ್ಯಕತೆ ಇದ್ದಾಗ ದಾಖಲೆಗಳ ಅಗತ್ಯವಿಲ್ಲದೆ ಈ ಸಾಲವನ್ನು ನೀಡಲಾಗುತ್ತದೆ. ಈ ಲೋನಿನ ಪ್ರಮುಖ ಪ್ರಯೋಜನಗಳೆಂದರೆ, ಮದುವೆ, ರಜೆ ಮತ್ತು ತುರ್ತು ಪರಿಸ್ಥಿತಿಗಳಂತಹ ಇತ್ಯಾದಿ ಸಂದರ್ಭಗಳಿಗೆ ನೀವು ಈ ಸಾಲವನ್ನು ಪಡೆಯಬಹುದಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ. 

ಎಸ್ ಬಿ ಐ ಪೂರ್ವ ಅನುಮೋದಿತ ವೈಯಕ್ತಿಕ ಸಾಲವನ್ನು ಎಸ್‌ಬಿಐ ಯೋನೋ ಅಪ್ಲಿಕೇಶನ್ ಮೂಲಕ ನೀಡಲಾಗುತ್ತದೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದಾರೆ ಇವತ್ತು ಅಥವಾ ನಾಳೆ ಸಾಲ ಪಡೆಯಬಹುದಾಗಿದೆ. ಹಾಗೂ ತ್ವರಿತ ಸಾಲವನ್ನು ಕೂಡ ಪಡೆಯುವ ಅವಕಾಶವನ್ನು ಎಸ್ಬಿಐ ಗ್ರಾಹಕರು ಹೊಂದಿರುತ್ತಾರೆ. 

ಸಾಲ ಪಡೆಯಲು ಅರ್ಹತೆಗಳು: 

  • CSP (ಗ್ರಾಹಕ ಸೇವಾ ಕೇಂದ್ರ) ಅಲ್ಲದ ಗ್ರಾಹಕರು ಎಸ್ ಬಿ ಐ ಪೂರ್ವ ಅನುಮೋದಿತ ಸಾಲ ಪಡೆಯಲು ಅರ್ಹರು. 
  • ಎಸ್ ಬಿ ಐ ಬ್ಯಾಂಕಿನ ಉಳಿತಾಯ ಖಾತೆದಾರರು ಕೂಡ ಅರ್ಜಿ ಸಲ್ಲಿಸಲು ಅರ್ಹರು. 
  • ಇನ್ನಷ್ಟು ಹೆಚ್ಚಿನ ಅರ್ಹತಾ ವಿವರಗಳಿಗಾಗಿ ನಿಮ್ಮ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಳ್ಳಿ. 

ಬೇಕಾಗುವ ದಾಖಲೆಗಳು: 

ಎಸ್ ಬಿ ಐ ಗ್ರಾಹಕರು ಈ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅಂದರೆ ಇವನು ಅಪ್ಲಿಕೇಶನ್ ಮೂಲಕ ಪೂರ್ವ ಅನುಮೋದಿತ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಹೋದಾಗ ಗ್ರಾಹಕರು ಯಾವುದೇ ದಾಖಲೆಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. 

ಸಾಲ ಪಡೆಯುವುದು ಹೇಗೆ?

ಮೊದಲು ನೀವು YONO ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ಪಡೆದುಕೊಂಡು ಲಾಗಿನ್ ಆಗಬೇಕು. ನಂತರ ಈಗ ಪಡೆದುಕೊಳ್ಳಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಸಾಲದ ಅವಧಿ ಮತ್ತು ಸಾಲದ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್ ನಲ್ಲಿ ಸ್ವೀಕರಿಸಿರುವಂತಹ ಓ ಟಿ ಪಿ ಯನ್ನು ನಮೂದಿಸಬೇಕು. 

ನೀವು ಒಟಿಪಿಯನ್ನು ನಮೂದಿಸಿದ ನಂತರ ಸಾಲದ ಅನುಮೋದನೆಯ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಅದರಿಂದ ಇದರ ಮೂಲಕ ತಿಳಿಯುವುದೇನೆಂದರೆ ಯೋನೊ ಎಸ್ ಬಿ ಐ ಅಪ್ಲಿಕೇಶನ್ ಮೂಲಕ ಎಸ್ಬಿಐ ಗ್ರಾಹಕರು ಸುಲಭವಾಗಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಓದುಗರ ಗಮನಕ್ಕೆ: ಸಾಲ ಪಡೆಯುವ ಸಮಯದಲ್ಲಿ ಗ್ರಾಹಕರು ನೀಡಿರುವಂತಹ ನಿಯಮಗಳು ಮತ್ತು ಶರತ್ತುಗಳನ್ನು ಪೂರ್ತಿಯಾಗಿ ಓದಿದ ನಂತರವೇ ಸಾಲ ಪಡೆಯುವುದು ಸೂಕ್ತ. ಇದರ ವಿಚಾರವಾಗಿ ಅಂದರೆ ಸಾಲದ ವಿಚಾರವಾಗಿ ಕರ್ನಾಟಕ ಸಮಯ ಜಾಲತಾಣದ ಹೊಣೆಗಾರಿಕೆ ಅಥವಾ ಪಾಲುದಾರಿಕೆ ಇರುವುದಿಲ್ಲ. ಈ ಲೇಖನ ಕೇವಲ ಮಾಹಿತಿ ಗೋಸ್ಕರ.

WhatsApp Group Join Now
Telegram Group Join Now

Leave a Comment