Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಬೇಕಾಗುವ ದಾಖಲೆಗಳು ಯಾವುವು?
Ration Card Correction: ನಮಸ್ಕಾರ ರಾಜ್ಯದ ಜನತೆಗೆಲ್ಲರಿಗೂ, ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮತ್ತೊಮ್ಮೆ ಅವಕಾಶವನ್ನು ನೀಡಲಾಗಿದ್ದು, ಇನ್ನೂ ಯಾರು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಲ್ಲ ಅಂತವರು ಈ ಕೂಡಲೇ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸಮಯ ಏನು? ಮತ್ತು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಎಂಬ ಸಕಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿರುತ್ತದೆ ನೋಡಿ.
ಈ ಮೊದಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಆಗಲಿ ಅಥವಾ ಹೊಸ ರೇಷನ್ ಕಾರ್ಡ್ ಗಳಿಗೆ ಆಗಲಿ ಜಾಸ್ತಿ ಸಮಯ ಅವಕಾಶ ಕೊಟ್ಟಿರಲಿಲ್ಲ. ಜನರು ಸಾಕಷ್ಟು ಆಕ್ರೋಶವನ್ನು ವ್ಯಕ್ತಪಡಿಸಿದಾಗ ಆಹಾರ ಇಲಾಖೆಯು ರೇಷನ್ ಕಾರ್ಡ್ ಹೊಂದಿದವರಿಗೆ ಕುಟುಂಬದ ಸದಸ್ಯರನ್ನು ಸೇರಿಸಲು ಮತ್ತು ಇನ್ಯಾವುದೇ ಬದಲಾವಣೆಗಳನ್ನು ರೇಷನ್ ಕಾರ್ಡ್ ನಲ್ಲಿ ಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದೆ.
ರೇಷನ್ ಕಾರ್ಡ್ (Ration Card) ತಿದ್ದುಪಡಿಗೆ ಸಮಯ:
ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕೆಂದು ಬಯಸಿದರೆ ರಾಜ್ಯದ ಎಲ್ಲಾ ಕಡೆ ಇವತ್ತಿನ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಕೊಳ್ಳಬಹುದಾಗಿರುತ್ತದೆ. ರೇಷನ್ ಕಾರ್ಡ್ ನಲ್ಲಿ ಅವೆಲ್ಲ ಬದಲಾವಣೆಗಳನ್ನು ಮಾಡಿಸಬಹುದು ಮತ್ತು ಅಗಲ ದಾಖಲೆಗಳು ಬೇಕಾಗುತ್ತವೆ? ಇಲ್ಲಿದೆ ಉತ್ತರ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ (5 ವರ್ಷದ ಮಗುವಿನ ಸೇರ್ಪಡೆ ಇದ್ದಲ್ಲಿ)
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಹಳೆಯ ರೇಷನ್ ಕಾರ್ಡ್
- ಬಯೋಮೆಟ್ರಿಕ್ ಗುರುತುಗಳು ಬೇಕು
ಯಾವೆಲ್ಲ ತಿದ್ದುಪಡಿ ಮಾಡಿಸಬಹುದು:
ನೀವು ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಿದೆ. ಕುಟುಂಬದ ಸದಸ್ಯರ ಹೆಸರನ್ನು ತಿದ್ದುಪಡಿ ಮಾಡಿಸಬಹುದು. ನ್ಯಾಯಬೆಲೆ ಅಂಗಡಿಯನ್ನು ಬದಲಾವಣೆ ಕೂಡ ಮಾಡಿಸಿಕೊಳ್ಳಬಹುದು. ಹೊಸದಾಗಿ ಮದುವೆಯಾದವರ ಸೇರ್ಪಡೆಯನ್ನು ಕೂಡ ಮಾಡಿಸಿಕೊಳ್ಳಬಹುದು. ಮಕ್ಕಳನ್ನು ಕೂಡ ಸೇರ್ಪಡೆ ಮಾಡಿಸಿಕೊಳ್ಳಬಹುದು. ಮೃತಪಟ್ಟವರ ಹೆಸರನ್ನು ತೆಗೆದುಹಾಕಬಹುದು. ಮದುವೆಯಾದವರ ರೇಷನ್ ಕಾರ್ಡ್ ಗಳಲ್ಲಿ ಹೆಸರನ್ನು ತೆಗೆದುಹಾಕಬಹುದು.
ತಿದ್ದುಪಡಿ ಮಾಡಿಸುವುದು ಹೇಗೆ?
ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ನಿಮಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅವಶ್ಯಕತೆ ಇದ್ದಲ್ಲಿ ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತ ಸೇವಾ ಕೇಂದ್ರಗಳಿಗೆ ಅಂದರೆ, ಗ್ರಾಮಒನ್, ಕರ್ನಾಟಕಒನ್, ಬೆಂಗಳೂರುಒನ್ ಈ ರೀತಿ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಬೇಕಾಗುವ ದಾಖಲೆಗಳನ್ನು ಒದಗಿಸಿ, ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.