Pension Scheme: ಈ ಯೋಜನೆಯ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳು 3,000! ಈಗಲೇ ಅರ್ಜಿ ಸಲ್ಲಿಸಿ!
PM Kisan Mandhan Yojana: ಈ ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ ಅಡಿಯಲ್ಲಿ ರೈತರಿಗೆ ಪಿಂಚಣಿಯನ್ನು ನೀಡಲು ಅವಕಾಶವನ್ನು ಮಾಡಿಕೊಳ್ಳಲಾಗಿದೆ. ಪ್ರತಿ ತಿಂಗಳು ಕೂಡ ರೈತರಿಗೆ ರೂ. 3000 ಈ ಯೋಜನೆಯ ಅಡಿಯಲ್ಲಿ ಸಿಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಮಾಹಿತಿಯ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರದ ವತಿಯಿಂದ ಲಭ್ಯವಿರುವ ಯೋಜನೆಯು ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ಕೂಡ 3000 ಅನ್ನು ಪಿಂಚಣಿ ರೂಪದಲ್ಲಿ ನೀಡುತ್ತದೆ. 2019 ಸೆಪ್ಟೆಂಬರ್ 12ರಂದು ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಮೂಲಕ ವೃದ್ಯಾಪ್ಯ ಜೀವನವನ್ನು ನಡೆಸುತ್ತಿರುವ ರೈತರಿಗೆ ಆರ್ಥಿಕ ಸಹಾಯವನ್ನು ನೀಡುವ ಗುರಿಯಿಂದಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಕೃಷಿ ಮಾಡಿಕೊಳ್ಳಲು 2 ಹೆಕ್ಟರ್ ಗಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ಅತಿ ಸಣ್ಣ ಹಾಗೂ ಸಣ್ಣ ರೈತರಿಗೆ ಈ ಯೋಜನೆಯ ಲಾಭ ಪಡೆಯುವ ಅವಕಾಶವಿರುತ್ತದೆ. ನೀವೇನಾದರೂ ಈ ಯೋಜನೆಯ ಲಾಭ ಪಡೆಯಬೇಕೆಂದು ಬಯಸಿದರೆ ಈ ಕೆಳಗೆ ನೀಡಿರುವಂತಹ ಮಾರ್ಗವನ್ನು ಅನುಸರಿಸಿ.
ನೀವು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಬಯಸಿದರೆ, ಅರ್ಜಿದಾರರು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 42 ವರ್ಷಗಳ ವಯಸ್ಸಿನ ಅನುಗುಣವಾಗಿ ಪ್ರತಿ ತಿಂಗಳು 55 ರಿಂದ 200 ರೂಪಾಯಿ ಪಾವತಿ ಮಾಡಬೇಕು. 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ಕೂಡ 3000 ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತೀರಾ.
ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿ ಸಲ್ಲಿಸಲು ಬಯಸುವಂತಹ ರೈತನ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.
- ಅರ್ಜಿದಾರರ ಮಾಸಿಕ ಆದಾಯ ಹದಿನೈದು ಸಾವಿರ ರೂಪಾಯಿಯನ್ನು ಮೀರಿರಬಾರದು ಎಂದು ತಿಳಿಸಲಾಗಿದೆ.
- ಕೃಷಿ ಮಾಡಿಕೊಳ್ಳಲು ಎರಡು ಹೆಕ್ಟರ್ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಐಡೆಂಟಿಟಿ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ವಿಳಾಸದ ಪುರಾವೆ
- ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಕೇಂದ್ರ ಸರ್ಕಾರದಿಂದ ಜಾರಿ ಇರುವ ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಿ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು ಕೂಡ ರೂ.3,000 ಪಿಂಚಣಿಯನ್ನು ಪಡೆಯಬೇಕೆಂದು ಬಯಸಿದರೆ, ಮೇಲೆ ನೀಡಿರುವಂತಹ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು, ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅಥವಾ ನಿಮ್ಮ ಹತ್ತಿರ ಇರುವ ಆನ್ಲೈನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
Application Link | Apply Now |