Jio Offers: ನೀವು ಜಿಯೋ ಸಿಮ್ ಬಳಸುತ್ತೀರಾ? ನಿಮಗೆ ವಿಶೇಷ ಆಫರ್ ಗಳು ಇಲ್ಲಿವೆ ನೋಡಿ!
ನಮಸ್ಕಾರ ರಾಜ್ಯದ ಜನತೆಗೆಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ, ಜಿಯೋ ಬಳಕೆದಾರರಾಗಿದ್ದರೆ ನೀವು ಕಡಿಮೆ ಬೆಲೆಯಲ್ಲಿ ಯಾವಾಗ್ಲಾದ್ರೂ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಬೆಲೆಗೆ ತಕ್ಕ ರೀತಿಯಲ್ಲಿ ಯಾವೆಲ್ಲ ಸೇವೆಗಳನ್ನು ಯಾವ ಪ್ಲಾನುಗಳಲ್ಲಿ ಪಡೆಯಬಹುದಾಗಿರುತ್ತದೆ? ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ.
ಈ ಲೇಖನದಲ್ಲಿ ರಾಜ್ಯದಲ್ಲಿ ಅಥವಾ ದೇಶದಲ್ಲಿ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವಂತಹ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಹಗಳಿಗೆ ಪರಿಚಯಿಸಿರುವ ಮೂರು ಹೊಸ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ. ಈ ಪ್ಲಾನುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನೀವು ಯಾವೆಲ್ಲ ಪ್ರಯೋಜನಗಳನ್ನು ಪಡೆಯುತ್ತೀರಾ ಎಂಬುದನ್ನು ಈ ಲೇಖನದಲ್ಲಿ ನೀವು ಮಾಹಿತಿ ಪಡೆಯಬಹುದಾಗಿರುತ್ತದೆ.
ಜಿಯೋ ₹749 ರಿಚಾರ್ಜ್ ಪ್ಲಾನ್: (Jio Offers)
ನೀವೇನಾದರೂ ಈ ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡರೆ 72 ದಿನಗಳ ವ್ಯಾಲಿಡಿಟಿಯ ಜೊತೆಗೆ ಒಟ್ಟು 164GB ಡೇಟಾ ಅಂದರೆ ಪ್ರತಿದಿನವೂ ಕೂಡ 2GB ಡೇಟಾವನ್ನು ಪಡೆಯಬಹುದಾಗಿರುತ್ತದೆ. ಹಾಗೂ ಹೆಚ್ಚುವರಿ 20GB ಡೇಟಾದ ಜೊತೆಗೆ ಅನಿಯಮಿತ ಕರೆಗಳನ್ನು ಬಳಸಬಹುದಾಗಿರುತ್ತದೆ. ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳನ್ನು ಕೂಡ ಬಳಸಬಹುದಾಗಿರುತ್ತದೆ. ಜೊತೆಗೆ ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ಕ್ಲೌಡ್ ಉಚಿತ ಚಂದದಾರರಿಗೆ ಜೊತೆಗೆ ಅನಿಯಮಿತ 5G ಡೇಟಾ ಕೂಡ ಬಳಸಬಹುದಾಗಿದೆ.
ಜಿಯೋ ₹899 ರಿಚಾರ್ಜ್ ಪ್ಲಾನ್:
ನೀವೇನಾದರೂ ಈ ರಿಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡಲ್ಲಿ 90 ದಿನಗಳ ವ್ಯಾಲಿಡಿಟಿ ಜೊತೆಗೆ ಒಟ್ಟು 200GB ಡೇಟಾ ಅಂದರೆ ಪ್ರತಿದಿನವೂ ಕೂಡ 2GB ಡೇಟಾವನ್ನು ಬಳಸಬಹುದಾಗಿರುತ್ತದೆ. ಹಾಗೂ ಹೆಚ್ಚುವರಿ 20GB ಡೇಟಾ ಜೊತೆಗೆ ಅನಿಯತ ಕರೆಗಳನ್ನು ಮತ್ತು 100 ಎಸ್ಎಂಎಸ್ ಗಳನ್ನು ಪ್ರತಿದಿನ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಹಾಗೂ ಜಿಯೋ ಕ್ಲೌಡ್ ಉಚಿತ ಚಂದಾದಾರರಿಗೆ ಕೂಡ ದೊರೆಯುತ್ತದೆ. ಅನಿಮಿತ 5G ಡೇಟಾ ಕೂಡ ಬಳಸಬಹುದಾಗಿದೆ.
ಜಿಯೋ ₹1299 ರಿಚಾರ್ಜ್ ಪ್ಲಾನ್:
ನೀವೇನಾದರೂ ಈ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 84 ದಿನಗಳವರೆಗೆ ವ್ಯಾಲಿಡಿಟಿಯ ಜೊತೆಗೆ 168GB ಅಂದರೆ ಪ್ರತಿದಿನವೂ ಕೂಡ 2GB ಡೇಟಾವನ್ನು ಬಳಸಬಹುದಾಗಿರುತ್ತದೆ. ಅನಿಯಮಿತ ಕರೆಗಳು ಹಾಗೂ 100 ಎಸ್ಎಂಎಸ್ ಗಳನ್ನು ನೀವು ಪ್ರತಿದಿನ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ “ನೆಟ್ ಪ್ಲಿಕ್ಸ್”, ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಉಚಿತ ಚಂದಾದಾರರಿಗೆಯನ್ನು 84 ದಿನಗಳವರೆಗೆ ಪಡೆಯಬಹುದಾಗಿರುತ್ತದೆ. ಮತ್ತು ಅನಿಯಮಿತ 5G ಡೇಟಾವನ್ನು ಪಡೆಯಬಹುದಾಗಿರುತ್ತದೆ.