Gruhalakshmi: ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಜಮಾ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣದ ಬಗ್ಗೆ ಹೊಸದಾಗಿ ಬಂದಿರುವ ಅಪ್ಡೇಟ್ ಅನ್ನು ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ. ಆದ್ದರಿಂದ ಸಂಪೂರ್ಣವಾದ ಮಾಹಿತಿ ಪಡೆಯಬೇಕೆಂದು ಇಚ್ಛಿಸುವವರು ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ನೀಡುವ 2,000 ಹಣ ರಾಜ್ಯದ ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಬಹಳಷ್ಟು ಸಹಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿಯವರೆಗೆ ಅರ್ಹತೆ ಉಳ್ಳಂತಹ ಮಹಿಳೆಯರು 14 ಕಂತುಗಳ ವರೆಗೆ ಹಣವನ್ನು ಪಡೆದುಕೊಂಡಿರುತ್ತಾರೆ. ಮತ್ತು 15ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ? ಎಂದು ಕಾತುರದಿಂದ ಕಾದು ಕುಳಿತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ:
ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾ? ಹಾಗಾದರೆ ಲೇಖನ ಕೊನೆಯವರೆಗೂ ಓದಿ. ಇದುವರೆಗೆ ಮಹಿಳೆಯರಿಗೆ 14 ಕಂತುಗಳವರೆಗೆ ಹಣ ಜಮಾ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ 15ನೇ ಕಂತಿನ 2000 ಜಮಾ ಆಗುವುದರ ಬಗ್ಗೆ ಜನರು ಎದುರು ನೋಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ ಆಗುವುದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ ಅವರು ಡಿಸೆಂಬರ್ 30ನೇ ತಾರೀಖಿನ ಒಳಗಾಗಿ ಅರ್ಹತೆ ಇರುವಂತಹ ಮಹಿಳೆಯರ ಖಾತೆಗೆ 15ನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ. ಹಾಗೂ 14ನೇ ಕಂತಿನ ಹಣ ಬರದೆ ಇರುವ ಕೆಲವು ಮಹಿಳೆಯರಿಗೂ ಕೂಡ ಡಿಸೆಂಬರ್ ಮುಗಿಯೋದರ ಒಳಗಾಗಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹಣ ಜಮಾ ಆಗುವುದು ಸ್ವಲ್ಪ ವಿಳಂಬವಾಗಿರುತ್ತದೆ ದಯವಿಟ್ಟು ಮಹಿಳೆಯರ ಸಹಕರಿಸಬೇಕೆಂದು ಮಾಹಿತಿ ಹಂಚಿಕೊಂಡಿದ್ದಾರೆ.
ಗೃಹಲಕ್ಷ್ಮಿ (Gruhalakshmi) ಹಣ ಬಂದಿಲ್ಲ ಅಂದರೆ ಏನು ಮಾಡಬೇಕು?
ನಿಮಗೇನಾದರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಅಂದರೆ, ನಿಮ್ಮ ಪ್ರದೇಶಕ್ಕೆ ಒಳಪಡುವಂತಹ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅರ್ಜಿ ಹಾಕಿರುವಂತಹ ರಸೀದಿಯನ್ನು ಕೊಟ್ಟು ಅರ್ಜಿ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಯಾವುದಾದರೂ ಸಮಸ್ಯೆ ಕಂಡು ಬಂದಲ್ಲಿ ಪರಿಹರಿಸಿಕೊಂಡು ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಪಡೆಯಬಹುದಾಗಿರುತ್ತದೆ.