Gruhalakshmi: ಗೃಹಲಕ್ಷ್ಮಿ 15ನೇ ಕಂತಿನ 2,000 ಹಣ ಜಮಾ! ಇಲ್ಲಿರುವ ಜಿಲ್ಲೆಗಳಿಗೆ ಮೊದಲು ಹಣ ಬಿಡುಗಡೆ!

Gruhalakshmi: ಗೃಹಲಕ್ಷ್ಮಿ 15ನೇ ಕಂತಿನ 2,000 ಹಣ ಜಮಾ! ಇಲ್ಲಿರುವ ಜಿಲ್ಲೆಗಳಿಗೆ ಮೊದಲು ಹಣ ಬಿಡುಗಡೆ!

Gruhalakshmi Amount Credit: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದಲ್ಲಿರುವಂತಹ ಗೃಹಲಕ್ಷ್ಮಿಯರಿಗೆ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆಯು ಜಾರಿಗೆ ಬಂದಾಗಿನಿಂದ ಹಲವಾರು ಮಹಿಳೆಯರಿಗೆ ಸಾಕಷ್ಟು ಆರ್ಥಿಕವಾಗಿ ಸಹಾಯಕವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಗೃಹಲಕ್ಷ್ಮಿಯರಿಗೆ ತಮ್ಮ ಮನೆಯ ಖರ್ಚುಗಳನ್ನು ನಿವಾರಿಸಿಕೊಂಡು ಹೋಗಲು ಪ್ರತಿ ತಿಂಗಳು ಕೂಡ ದೊರಕುವ 2000 ರೂಪಾಯಿ ಆರ್ಥಿಕ ಸಹಾಯಕವಾಗಿದೆ ಎಂದು ಹೇಳಬಹುದು. 

ನಿಮಗೆಲ್ಲ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಯೋಜನೆ ಯಿಂದ 2000 ಪ್ರತಿ ತಿಂಗಳು ಕೂಡ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಇನ್ನು 15ನೇ ಕತ್ತಿನ ಹಣಕ್ಕಾಗಿ ಕಾದು ಕುಳಿತಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಗುಡ್ ನ್ಯೂಸ್ ಹೇಳಿರುತ್ತಾರೆ.

ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ:

ಸ್ನೇಹಿತರೆ, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ ಆಗುವ ಪ್ರಕ್ರಿಯೆ ಡಿಸೆಂಬರ್ 10ನೇ ತಾರೀಖಿನಿಂದ ಆರಂಭವಾಗಿದ್ದು, ಈ ಕೆಳಗೆ ನೀಡಿರುವ ಜಿಲ್ಲೆಗಳಿಗೆ ಮೊದಲು ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವೆ ಹೇಳಿಕೆಯನ್ನು ನೀಡಿರುತ್ತಾರೆ. ಆ ಜಿಲ್ಲೆಗಳು ಯಾವುವು ಎಂಬುದನ್ನು ನೀವು ಈ ಕೆಳಗೆ ಕಾಣಬಹುದಾಗಿರುತ್ತದೆ.

ಈ ಜಿಲ್ಲೆಗಳಿಗೆ ಮೊದಲು ಹಣ ಜಮಾ:

  • ರಾಯಚೂರು 
  • ಯಾದಗಿರಿ 
  • ಬೆಂಗಳೂರು ಗ್ರಾಮಾಂತರ 
  • ಬೀದರ್ 
  • ಮಂಡ್ಯ 
  • ಬೆಂಗಳೂರು ನಗರ 
  • ಚಿಕ್ಕಬಳ್ಳಾಪುರ 
  • ಬಾಗಲಕೋಟೆ 
  • ಕೊಪ್ಪಳ 
  • ಕೊಡಗು 
  • ಗದಗ 
  • ಉತ್ತರ ಕನ್ನಡ 
  • ಕಲಬುರಗಿ 
  • ಉಡುಪಿ

ಮೇಲೆ ನೀಡಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣವನ್ನು ಮೊದಲ ಹಂತದಲ್ಲಿ ಜಮಾ ಮಾಡಲಾಗುವುದು ಎಂದು ತಿಳಿಸಿರುತ್ತಾರೆ. ಈ ಮಾಹಿತಿ ತಿಳಿದಿದ್ದು ಸಾಕಷ್ಟು ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿಯನ್ನು ನೀಡಿದಂತಾಗಿದೆ ಎಂದು ಹೇಳಬಹುದು. 

ಈ ಮೇಲೆ ನಿಮಗೆ ಪಟ್ಟಿ ಮಾಡಿರುವ ಜಿಲ್ಲೆಗಳಿಗೆ ಇವತ್ತಿನಿಂದ 15ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿಯನ್ನು ಹಂಚಿಕೊಂಡಿರುತ್ತಾರೆ. ಈ ಹಣದ ಜಮಾ ಸ್ಟೇಟಸ್ ಅನ್ನು ನೀವು “DBT ಕರ್ನಾಟಕ” ಅಪ್ಲಿಕೇಶನ್ ಮೂಲಕ ಪರಿಶೀಲಿಸಿಕೊಳ್ಳಬಹುದು..

WhatsApp Group Join Now
Telegram Group Join Now