Parihara: ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮಾ! ಈಗಲೇ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ!
Bele Parihara Jama: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಜನತೆಗೆ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಿಮಗೆಲ್ಲ ಗೊತ್ತಿರುವ ಹಾಗೆ ರೈತರು ಬೆಳೆಯನ್ನು ಬೆಳೆಯಲು ಯಾವ ರೀತಿ ಕಷ್ಟ ಬೀಳುತ್ತಾರೆ ಎಂಬುದು ತಿಳಿದಿದೆ. ಆದರೂ ಕೂಡ ರೈತರಿಗೆ ಸರಿಯಾದ ಫಲ ಸಿಗುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೃಷಿಯಲ್ಲಿ ಬಹಳಷ್ಟು ಜನ ನಷ್ಟವನ್ನು ಅನುಭವಿಸುತ್ತಾರೆ. ಅದಕ್ಕಾಗಿ ಸರ್ಕಾರವು ಕೂಡ ಅನೇಕ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.
ನಿಮಗೆಲ್ಲ ಗೊತ್ತಿರುವ ಹಾಗೆ ರೈತರ ಬೆಳೆದಿರುವಂತಹ ಬೆಳೆಗೆ ಯಾವ ತೊಂದರೆಗಳಿಂದ ನಷ್ಟವಾಗಬಹುದು ಎಂದರೆ, ಸಾಮಾನ್ಯವಾಗಿ ಗೊತ್ತಿರುವ ಹಾಗೆ ಪ್ರಾಕೃತಿಕ ತೊಂದರೆಗಳನ್ನು ಅನುಭವಿಸುತ್ತಾರೆ. ಅಂದರೆ ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವುದು ಮತ್ತು ಅತಿ ಹೆಚ್ಚಿನ ಪ್ರಮಾಣದ ಮಳೆ ಉಂಟಾಗುವುದು ಮತ್ತು ವಾತಾವರಣದಲ್ಲಿ ಏರುಪೇರು ಕೂಡ ಉಂಟಾಗುವುದು ರೈತರ ಬೆಳೆಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಆದರೆ ಸರ್ಕಾರವು ಇದಕ್ಕಾಗಿ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಒದಗಿಸುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.
ಬೆಳೆ ಪರಿಹಾರದ (Parihara) ಹಣ ಯಾವಾಗ ಜಮಾ?
ಹಿಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಹಲವಾರು ಹೆಕ್ಟರ್ ಪ್ರದೇಶ ಬೆಳಹಾನಿಯಾಗಿರುವುದು ಕಂಡುಬಂದಿದೆ. ಇದರ ಸಮೀಕ್ಷೆ ನಡೆಸಿ, ರೈತರಿಗೆ ಸರ್ಕಾರವು ಬೆಳೆ ಪರಿಹಾರವನ್ನು ನೀಡುತ್ತದೆ. ಬೆಳೆ ಪರಿಹಾರದ ಹಣವು ಇನ್ನು ಒಂದು ವಾರದಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಪ್ರಶ್ನೆ ಬೈರೇಗೌಡರವರು ತಿಳಿಸಿರುತ್ತಾರೆ.
ಸ್ನೇಹಿತರೆ, ರೈತರ ಖಾತೆಗೆ ಯೋಜನೆ ಅಡಿಯಲ್ಲಿ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿರುತ್ತದೆ. ಹಿಂಗಾರು ಮಳೆಯ ನಂತರ ಬೆಳೆ ಹಾನಿಯನ್ನು ಎದುರಿಸಿರುವ ರೈತರ ಖಾತೆಗೆ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ. ಬೆಳೆ ಪರಿಹಾರವನ್ನು ರೈತರ ಖಾತೆಗೆ ಇನ್ನೂ ಒಂದು ವಾರದಲ್ಲಿ ಜಮಾ ಮಾಡಲಾಗುವುದು ಎಂದು ಮಾಹಿತಿ ತಿಳಿದು ಬಂದಿರುತ್ತದೆ.
ಈ ಸರ್ಕಾರದ ಬೆಳೆ ಪರಿಹಾರದ ಹಣವು ರೈತರಿಗೆ ಶಾಶ್ವತ ಪರಿಹಾರವಲ್ಲ. ಆದರೂ ಕೂಡ ರೈತರಿಗೆ ಸ್ವಲ್ಪ ಮಟ್ಟದಲ್ಲಿ ಆದರೂ ಕೂಡ ಆರ್ಥಿಕ ಸಹಾಯವಾಗಲಿ ಎಂಬ ಉದ್ದೇಶದಿಂದ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ಇದು ತಾತ್ಕಾಲಿಕವಾಗಿ ಅವರಿಗೆ ಆರ್ಥಿಕ ನೆರವಾಗಲಿ ಎಂಬ ಉದ್ದೇಶದಿಂದ ಹಣವನ್ನು ರೈತರ ಖಾತೆಗೆ ಹಾಕಲಾಗುತ್ತದೆ.