Aadhaar Card: ಆಧಾರ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್! ಇಲ್ಲಿದೆ ಸಂಪೂರ್ಣವಾದ ವಿವರ!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಜನತೆಗೆ ತಿಳಿಸುವುದೇನೆಂದರೆ, ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕವನ್ನು ನಿಗದಿ ಮಾಡಿತ್ತು. ಕೊನೆ ದಿನಾಂಕ ಯಾವಾಗ? ಮತ್ತು ಆಧಾರ್ ಕಾರ್ಡನ್ನು ಯಾಕೆ ಅಪ್ಡೇಟ್ ಮಾಡಿಸಬೇಕು? ಎಂಬ ವಿವರವನ್ನು ಈ ಲೇಖನದಲ್ಲಿ ಪಡೆಯಬಹುದಾಗಿದೆ.
ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನು ಹೊಂದಿರಬೇಕಾದ ದಾಖಲೆ ಎಂದರೆ ಅದು ಆಧಾರ್ ಕಾರ್ಡ್. ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದ್ದು, ಇವತ್ತಿನ ದಿನಮಾನಗಳಲ್ಲಿ ಆಧಾರ್ ಕಾರ್ಡ್ ಪ್ರಾಮುಖ್ಯತೆಯನ್ನು ವಹಿಸುವ ದಾಖಲೆ ಆಗಿರುತ್ತದೆ.
ನೀವು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರುತ್ತೀರಾ. ಈ ದಿನಾಂಕದ ಒಳಗಾಗಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾಗುತ್ತದೆ ಕೊನೇ ದಿನಾಂಕ ಯಾವಾಗ ಅಥವಾ ಅಪ್ಡೇಟ್ ಮಾಡಿಸದೇ ಇದ್ದರೆ ಯಾವೆಲ್ಲ ತೊಂದರೆಗಳಾಗಬಹುದು? ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು? ಇವುಗಳ ಬಗ್ಗೆ ಈ ಕೆಳಗೆ ವಿವರಣೆ ನೀಡಲಾಗಿದೆ.
ಆಧಾರ್ ಅಪ್ಡೇಟ್ ದಿನಾಂಕ ವಿಸ್ತರಣೆ:
ಈ ಹಿಂದೆ ಡಿಸೆಂಬರ್ 14ನೇ ತಾರೀಕು 2024 ಕೊನೆಯ ದಿನಾಂಕ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಜೂನ್ 15-2025ಕ್ಕೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಗಡುವನ್ನು ವಿಸ್ತರಣೆ ಮಾಡಲಾಗಿರುತ್ತದೆ. ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿದವರು ಅಲ್ಲಿಯವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು. ಪ್ರತಿಯೊಬ್ಬರೂ ಕೂಡ ಜೂನ್ 15- 2025ನೇ ತಾರೀಖಿನ ಒಳಗಾಗಿ ಆಧಾರ್ ಕಾರ್ಡನ್ನು ಉಚಿತವಾಗಿ ಆಧಾರ್ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಲು ಅವಕಾಶವನ್ನು ನೀಡಲಾಗಿದೆ.
10 ವರ್ಷಗಳ ಕಾಲ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಅಪ್ಡೇಟ್ ಮಾಡಿಸದೆ ಇದ್ದವರು ಕಡ್ಡಾಯವಾಗಿ ಈ ಕೆಲಸವನ್ನು ಮಾಡಿಸಬೇಕಾಗುತ್ತದೆ. ಯಾವೆಲ್ಲ ದಾಖಲೆಗಳು ಬೇಕಾಗಬಹುದು ಎಂಬುದನ್ನು ನೀವು ನಿಮ್ಮ ಹತ್ತಿರವಿರುವಂತಹ ಆಧಾರ್ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಬೇಕಾಗುವ ದಾಖಲೆಗಳನ್ನು ಒದಗಿಸುವ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ.
ಅಥವಾ ನೀವೇನಾದರೂ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನೀವು ನಿಮ್ಮ ಮೊಬೈಲ್ನಲ್ಲೇ ಮಾಡಿಕೊಳ್ಳಬೇಕೆಂದು ಬಯಸಿದರೆ ಈ ಕೆಳಗಡೆ ಜಾಲತಾಣವನ್ನು ನೀಡಲಾಗಿರುತ್ತದೆ. ಅದನ್ನು ಬಳಸಿಕೊಂಡು ಆಧಾರ್ ಕಾರ್ಡ್ ನಂಬರ್ ಹಾಕಿ ಮೊಬೈಲ್ ನಂಬರ್ ಗೆ ಬರುವ ಓಟಿಪಿ ಅನ್ನು ನಮೂದಿಸಿ ನಂತರ “ಡಾಕ್ಯುಮೆಂಟ್ ಅಪ್ಡೇಟ್” ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಮೂಲಕ ತುಂಬಾ ಸುಲಭವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದಾಗಿದೆ.