Railway Jobs: 10ನೇ ತರಗತಿ ಪಾಸ್ ಆಗಿದ್ದೀರಾ? ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ರೈಲ್ವೆ ಇಲಾಖೆ!
ನಮಸ್ಕಾರ ಎಲ್ಲರಿಗೂ, ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಯೂ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವಂತಹ ಯುವಕರಿಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದು.
ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿರುತ್ತದೆ. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ರೈಲ್ವೆ ಇಲಾಖೆ (Railway Jobs) ಅಪ್ರೆಂಟಿಸ್ ಹುದ್ದೆಗಳ ಅರ್ಜಿ ಆಹ್ವಾನ:
ಆಗ್ನೇಯ ರೈಲ್ವೆ ಅಪ್ಪ್ರೆಂಟಿಸ್ ನೇಮಕಾತಿ 2024 ಅಭಿಯಾನದ ಅಡಿಯಲ್ಲಿ ಸರಿ ಸುಮಾರು 1785 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭ ಮಾಡಲಾಗಿದೆ. ನವೆಂಬರ್ 28ನೇ ತಾರೀಕು ಅರ್ಜಿ ಸಲ್ಲಿಕೆ ಆರಂಭವಾಗಿತ್ತು ಅರ್ಜಿ ಸಲ್ಲಿಸಲು ಡಿಸೆಂಬರ್ 27 ನೇ ತಾರೀಕು 2024 ರವರೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಹೆಚ್ಚುವರಿ ವಿಷಯಗಳನ್ನು ಹೊರತುಪಡಿಸಿ ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದಿರುವ ಯಾವುದಾದರೂ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು ಎಂದು ತಿಳಿಸಲಾಗಿದೆ. ಹಾಗೂ ಐಟಿಐ ಪ್ರಮಾಣ ಪಾತ್ರವನ್ನು ಕೂಡ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ವಯೋಮಿತಿ:
ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ 15 ವರ್ಷ ಮೇಲ್ಪಟ್ಟು ಹಾಗೂ 24 ವರ್ಷ ಮೀರಿದೆ ಇದ್ದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತದೆ?
ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರವಾಗಿ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಿರುವಂತಹ ಮೆರಿಟ್ ಲಿಸ್ಟ್ ನ ಆಧಾರದ ಮೂಲಕ ಅಪ್ರಂಟಿಸ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೂ ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳಿಗೆ ಡಾಕ್ಯುಮೆಂಟ್ ಪರಿಶೀಲನೆಗೆ ಕರೆಯಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ?
ನೀವೇನಾದರೂ ಈ ಹುದ್ದೆಗಳು ಅರ್ಜಿ ಸಲ್ಲಿಸಲು ಬಯಸಿದರೆ ಸಾಮಾನ್ಯ ಹಾಗೂ ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿರುತ್ತದೆ. ಹಾಗೂ SC , ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಇಲ್ಲಿ ನೀಡಿರುವಂತಹ ಅಧಿಕೃತ ಜಾಲತಾಣ (rrcser.co.in) & (iroams.com) ವನ್ನು ಭೇಟಿ ನೀಡಿ ಅಪ್ರೆಂಟಿಸ್ ಹುದ್ದೆಯ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ ನೀವು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.