Ration Card Corrections: ರೇಷನ್ ಕಾರ್ಡ್ ತಿದ್ದುಪಡಿ ಆರಂಭ! ಇನ್ನು ಕೆಲವೇ ಸಮಯ ಕಾಲಾವಕಾಶ!
ನಮಸ್ಕಾರ ರಾಜ್ಯದ ಜನತೆಗೆ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರಾಜ್ಯದಲ್ಲಿ ಇದೀಗ ರೇಷನ್ ಕಾರ್ಡ್ ತಿದ್ದುಪಡಿಗಳು ಆರಂಭವಾಗಿದ್ದು ಅವಶ್ಯಕತೆ ಇರುವವರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬಹುದಾಗಿರುತ್ತದೆ. ಕೊನೆಯ ದಿನಾಂಕ ಯಾವಾಗ? ಮತ್ತು ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾಗುವ ದಾಖಲೆಗಳು ಯಾವುವು? ಎಂಬುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಆರಂಭ:
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕೆಂದು ಕಾದು ಕುಳಿತಿದ್ದವರಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು. ಯಾಕೆಂದರೆ, ರೇಷನ್ ಕಾರ್ಡ್ ನಲ್ಲಿ ಸದಸ್ಯರ ಸೇರ್ಪಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನೀವು ಇದೀಗ ಮಾಡಿಸಬಹುದಾಗಿರುತ್ತದೆ. ಈ ಕೆಳಗಡೆ ಯಾವ ದಾಖಲೆಗಳು ಬೇಕಾಗುತ್ತವೆ? ಮತ್ತು ಯಾವೆಲ್ಲ ಬದಲಾವಣೆಗಳನ್ನು ನೀವು ರೇಷನ್ ಕಾರ್ಡ್ ನಲ್ಲಿ ಮಾಡಿಸಬಹುದು? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
ರೇಷನ್ ಕಾರ್ಡ್ ನಲ್ಲಿ ಯಾವೆಲ್ಲ ಬದಲಾವಣೆ ಮಾಡಿಸಬಹುದು?
- ಹೊಸ ಸದಸ್ಯರ ಸೇರ್ಪಡೆ ಮಾಡಿಸಬಹುದು.
- ಸದಸ್ಯರನ್ನು ತೆಗೆದು ಹಾಕಬಹುದು.
- ಕುಟುಂಬದ ಮುಖ್ಯಸ್ಥರ ಬದಲಾವಣೆ ಮಾಡಿಸಬಹುದು.
- ವಿಳಾಸದ ಬದಲಾವಣೆ ಮಾಡಿಸಬಹುದು.
- ಇನ್ನಿತರ ಬದಲಾವಣೆಗಳನ್ನು ಮಾಡಲು ಅವಕಾಶ.
ಕೊನೆ ದಿನಾಂಕ ಯಾವಾಗ?
ಈ ಹಿಂದೆ ರೇಷನ್ ಕಾರ್ಡ್ ತಿದ್ದುಪಡಿಗಳು ಡಿಸೆಂಬರ್ 13ನೇ ತಾರೀಕು ಆರಂಭವಾಗಿದ್ದು ಡಿಸೆಂಬರ್ 31 ನೇ ತಾರೀಕು 2024ರ ವರೆಗೆ ಇರಲಿದೆ ಎಂಬ ಮಾಹಿತಿಗಳು ತಿಳಿದುಬಂದಿವೆ. ಅಲ್ಲಿಯವರೆಗೆ ಅವಶ್ಯಕತೆ ಇರುವವರು ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ. ಮತ್ತೆ ಯಾವಾಗ ಅವಕಾಶ ಕೊಡಲಾಗುವುದು ಎಂಬ ಸುಳಿವು ಇಲ್ಲ.
ಬೇಕಾಗುವ ದಾಖಲೆಗಳು:
- ಹಳೆಯ ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಆರು ವರ್ಷದ ಮಕ್ಕಳಿದ್ದಲ್ಲಿ ಜನನ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಬಯೋಮೆಟ್ರಿಕ್ ಗುರುತುಗಳು
ಮೇಲೆ ನೀಡಿರುವಂತಹ ದಾಖಲೆಗಳು ರೇಷನ್ ಕಾರ್ಡ್ ತಿದ್ದುಪಡಿಗೆ ಅವಶ್ಯಕವಾಗಿರುತ್ತವೆ. ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕೆಂದು ಬಯಸಿದರೆ ಡಿಸೆಂಬರ್ 31ನೇ ತಾರೀಖಿನ ಒಳಗಾಗಿ ರೇಷನ್ ಕಾರ್ಡ್ ಗಳ ತಿದ್ದುಪಡಿ ನೀವು ಮಾಡಿಸಿಕೊಳ್ಳಬಹುದಾಗಿದೆ.