Gruhalakshmi Amount: ಗೃಹಲಕ್ಷ್ಮಿ 15ನೇ ಕಂತಿನ 2000 ಜಮಾ! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

Gruhalakshmi Amount: ಗೃಹಲಕ್ಷ್ಮಿ 15ನೇ ಕಂತಿನ 2000 ಜಮಾ! ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

Gruhalakshmi Amount: ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣವು ಎಲ್ಲ ಮಹಿಳೆಯರಿಗೆ ಜಮಾ ಆಗಿರುತ್ತದೆ. ಹಣವನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು? ಹಾಗೂ ಬಾಕಿ ಇರುವಂತಹ ಹಣವನ್ನು ಪಡೆದುಕೊಳ್ಳಲು ಯಾವ ರೂಲ್ಸ್ ಗಳನ್ನು ಪಾಲಿಸಬೇಕು? ಎಂಬುದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡಲಾಗುವುದು. ಆದ ಕಾರಣ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿರಿ.

ಗೃಹಲಕ್ಷ್ಮಿ ಯೋಜನೆ: (Gruhalakshmi Amount)

ಗೃಹಲಕ್ಷ್ಮಿ ಯೋಜನೆಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿದ್ದು, ಪ್ರತಿ ತಿಂಗಳು ಕೂಡ ಮಹಿಳೆಯರಿಗೆ 2000 ಹಣವನ್ನು ನೇರವಾಗಿ ಖಾತೆಗೆ ಮಾಡುವ ಉದ್ದೇಶವನ್ನು ಹೊಂದಿದೆ. ಇದುವರೆಗೆ ಮಹಿಳೆಯರು 14 ಕಂತು ಹಣವನ್ನು ಪಡೆದುಕೊಂಡಿದ್ದಾರೆ. ಅಂದರೆ, 28,000 ವರೆಗೆ ಹಣವನ್ನು ಪಡೆದುಕೊಂಡಿದ್ದಾರೆ. ಇದೀಗ 15ನೇ ಕಂತಿನ ಹಣವು ಎಲ್ಲ ಮಹಿಳೆಯರ ಖಾತೆಗೆ ಜಮಾ ಆಗುತ್ತಿದೆ.

15ನೇ ಕಂತಿನ ಹಣ ಈಗಾಗಲೇ ಮಹಿಳೆಯರ ಖಾತೆಗೆ ವರ್ಗಾವಣೆ ಆಗಲು ಪ್ರಾರಂಭವಾಗಿದ್ದು, ಮಹಿಳೆಯರು ಸಂತಸದಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೇ ಡಿಸೆಂಬರ್ 31 ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ಮಹಿಳೆಯ ಖಾತೆಗೂ ಕೂಡ 15ನೇ ಕಂತಿನ ಹಣವನ್ನು ಜಮಾ ಮಾಡಲಾಗುವುದು ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ. 

ಗೃಹಲಕ್ಷ್ಮಿ ಹಣ ಹೀಗೆ ಚೆಕ್ ಮಾಡಿಕೊಳ್ಳಿ: 

ಮೊದಲು ಪ್ಲೇ ಸ್ಟೋರ್ ನಿಂದ “ಡಿಬಿಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಪಡೆದುಕೊಳ್ಳಿ.

ನಂತರ ಗೃಹಲಕ್ಷ್ಮಿ ಫಲಾನುಭವಿಯ ಆಧಾರ್ ಕಾರ್ಡ್ ನಂಬರ್ ಹಾಕಿ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ. 

ಫಲಾನುಭವಿಯ ವಿವರಗಳು ಕಾಣಿಸುತ್ತವೆ. ನಂತರ ನಮಗೆ ನಾಲ್ಕು ಆಯ್ಕೆಗಳು ಕೂಡ ಕಾಣಿಸುತ್ತವೆ. ಅದರಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆಯ ಮೇಲೆ ಒತ್ತಬೇಕು.

ನಂತರ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಎಂಬ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಗೃಹಲಕ್ಷ್ಮಿ ಯೋಜನೆಯ ಆಯ್ಕೆ ಮಾಡಿಕೊಳ್ಳಿ.

ನಂತರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಷ್ಟು ಕಂತಿನ ಹಣ ಜಮಾ ಆಗಿದೆ? ಮತ್ತು ಯಾವ ದಿನಾಂಕದಂದು ಎಷ್ಟು ಹಣ ಜಮಾ ಆಗಿದೆ? ಎಂಬ ಸಂಪೂರ್ಣವಾದ ಮಾಹಿತಿ ತಿಳಿಯುತ್ತದೆ.

WhatsApp Group Join Now
Telegram Group Join Now