Good News: 10ನೇ ತರಗತಿ ಪಾಸಾದ ಮಹಿಳೆಯರಿಗೆ ಸಿಹಿ ಸುದ್ದಿ! ಪ್ರತಿ ತಿಂಗಳು ಹಣ ಸಿಗುತ್ತೆ! LICಯಿಂದ ಹೊಸ ಯೋಜನೆ ಜಾರಿ!

Good News: 10ನೇ ತರಗತಿ ಪಾಸಾದ ಮಹಿಳೆಯರಿಗೆ ಸಿಹಿ ಸುದ್ದಿ! ಪ್ರತಿ ತಿಂಗಳು ಹಣ ಸಿಗುತ್ತೆ! LICಯಿಂದ ಹೊಸ ಯೋಜನೆ ಜಾರಿ!

Good News For SSLC Passed Women: ನಮಸ್ಕಾರ ರಾಜ್ಯದ ಜನತೆಗೆಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಭಾರತೀಯ ಜೀವ ವಿಮಾ ನಿಗಮ ಹೊಸದಾಗಿ ಪರಿಚಯಿಸಿರುವಂತಹ “ಎಲ್ಐಸಿ ಬಿಮಾ ಸಖಿ” ಯೋಜನೆಗೆ ಚಾಲನೆ ನೀಡಲಾಗಿದೆ. ಮಹಿಳಾ ಸಬಲೀಕರಣದ ಭಾಗವಾಗಿ ಎಲ್ಐಸಿ ಸಂಸ್ಥೆಯು ಈ ಯೋಜನೆಯನ್ನು ಜಾರಿಗೆ ತಂದಿದೆ ಇದರ ಪೂರ್ತಿ ವಿವರ ಇಲ್ಲಿದೆ ನೋಡಿ.

ಹೌದು ಸ್ನೇಹಿತರೆ, ಎಲ್ಐಸಿ ಇತ್ತೀಚಿಗೆ ಹೊಸ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಕೆಲವು ದಿನಗಳ ಹಿಂದೆ ಸ್ಕಾಲರ್ಶಿಪ್ ಅನ್ನು ಜಾರಿಗೆ ತಂದಿದ್ದು, ಈ ಸ್ಕಾಲರ್ಶಿಪ್ ಅಡಿಯಲ್ಲಿ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿತ್ತು. ಈಗ ಎಲ್ಐಸಿ ಬಿಮಾ ಸಖಿ ಯೋಜನೆಯನ್ನು ಎಲ್ಐಸಿ ಜಾರಿಗೆ ತಂದಿರುತ್ತದೆ. 

ಈ ಯೋಜನೆಗೆ ಪ್ರಧಾನಿಗಳಾಗಿರುವ ಶ್ರೀಯುತ ನರೇಂದ್ರ ಮೋದಿಯವರು ಸೋಮವಾರ ದಿನದಂದು ಹರಿಯಾಣದ ಪಾಣಿಪತ್ ನಲ್ಲಿ ಔಪಚಾರಿಕವಾಗಿ ಚಾಲನೆಯನ್ನು ನೀಡಿದ್ದಾರೆ. ಮಹಿಳಾ ಸಬಲೀಕರಣ ಎಂಬ ಪ್ರಮುಖ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಮುಂಬರುವ 12 ತಿಂಗಳುಗಳಲ್ಲಿ ಅಂದರೆ ವರ್ಷದಲ್ಲಿ ಒಂದು ಲಕ್ಷ ವಿಮಾ ಕಾರ್ಯಕರ್ತರನ್ನು ನೇಮಿಸಿಕೊಳ್ಳುವಂತಹ ಮಹತ್ತರವಾದ ಗುರಿಯನ್ನು ಹೊಂದಲಾಗಿದೆ ಎಂದು ಎಲ್ಐಸಿ ಸೋಮವಾರ ದಿನದಂದು ತಿಳಿಸಿದೆ.

ಈ ಯೋಜನೆಯ ಅಂಗವಾಗಿ ವಿಮಾ ಕಾರ್ಯಕರ್ತರಿಗೆ ಅಂತಾನೆ ಇಷ್ಟ 845 ಕೋಟಿಗಳಷ್ಟು ರೂಪಾಯಿ ವೆಚ್ಚವಾಗಲಿದೆ ಎಂದು ಎಲ್ಐಸಿ ಸಿಈಓ ಎಂಡಿ ಸಿದ್ದಾರ್ಥ್ ಮೋಹಂತಿ ತಿಳಿಸಿರುತ್ತಾರೆ. ಈ ಎಲ್ಐಸಿ ಬಿಮಾ ಸಖಿ ಯೋಜನೆಯು ಎಲ್ಐಸಿ ಸೇವೆಗಳನ್ನು ಅತ್ಯಂತ ಕುಗ್ರಾಮಗಳಿಗೂ ಕೂಡ ತಲುಪಿಸಲು ಉಪಯುಕ್ತವಾಗಿದೆ ಎಂದು ಸಿಈಓ ತಿಳಿಸಿದ್ದಾರೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಎಲ್ಐಸಿ ಬಿಮಾ ಸಖಿಯನ್ನು ನೇಮಿಸುವ ಯೋಜನೆ ಇದೆ ಎಂದು ತಿಳಿದು ಬಂದಿದೆ.

ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮಹಿಳೆಯರು ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಬಹುದಾಗಿರುತ್ತದೆ. 10ನೇ ತರಗತಿಯಲ್ಲಿ ಉತ್ತೀರ್ಣರಾದ 18 ರಿಂದ 70 ವರ್ಷದ ವಯಸ್ಸಿನ ಮಹಿಳೆಯರು ಎಲ್ಐಸಿ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪದವಿ ಮುಗಿಸಿದರು ಕೂಡ ಎಲ್ಐಸಿ ಸಂಸ್ಥೆಯಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿ ಅವಕಾಶ ಸಿಗುತ್ತದೆ ಎಂದು ತಿಳಿದುಬಂದಿದೆ. 

ಸಮಾಜದಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಒದಗಿಸುವ ಅವಕಾಶವು ಈ ಯೋಜನೆಯಿಂದ ಸಿಕ್ಕಿದಂತಾಗುತ್ತದೆ. ಸಾಕ್ಷರತೆ ಆರ್ಥಿಕತೆ ಹಾಗೂ ವಿಮೆಯ ಬಗ್ಗೆ ಹೆಚ್ಚಿನ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿರುತ್ತದೆ.

WhatsApp Group Join Now
Telegram Group Join Now