PhonePe Loan: ಫೋನ್ ಪೇ ಬಳಕೆದಾರರಿಗೆ ಸಿಹಿ ಸುದ್ದಿ! 5 ನಿಮಿಷಗಳಲ್ಲಿ 5 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತೆ!
PhonePe Loan Apply 2024: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ನಿಮಗೆ ತಿಳಿಸುವುದೇನೆಂದರೆ, ಸಾಮಾನ್ಯವಾಗಿ ಫೋನ್ ಪೇ ಮೊಬೈಲ್ ಅಪ್ಲಿಕೇಶನ್ ಅನ್ನು ಎಲ್ಲರೂ ಕೂಡ ಯುಪಿಐ ಟ್ರಾನ್ಸಾಕ್ಷನ್ ಗಳಿಗಾಗಿ ಬಳಸುತ್ತಾರೆ. ಈ ಆಪ್ ಎಲ್ಲ ಮೊಬೈಲುಗಳಲ್ಲಿ ಅನಿವಾರ್ಯ ಹಾಗೂ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ನೀವು ಈ ಫೋನ್ ಪೇ ಅಪ್ಲಿಕೇಶನ್ ಮೂಲಕ 5 ಲಕ್ಷದವರೆಗೆ ಕೆಲವೇ ನಿಮಿಷಗಳಲ್ಲಿ ಸಾಲವನ್ನು ಯಾವ ರೀತಿ ಪಡೆಯಬೇಕು ಎಂಬುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
ನೀವು ಮನೆಯಲ್ಲಿಯೇ ಕುಳಿತು ಫೋನ್ ಪೇ ಅಪ್ಲಿಕೇಶನ್ ಮೂಲಕ 10,000 ದಿಂದ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಇದಕ್ಕಾಗಿ ಯಾವುದೇ ರೀತಿಯ ಬ್ಯಾಂಕಿನ ಅಲೆದಾಟವಿಲ್ಲದೆ ನೀವು ನಿಮ್ಮ ಮೊಬೈಲ್ ನಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ. ಫೋನ್ ಪೇ ನಲ್ಲಿ ಸಾಲ ಪಡೆಯಲು ಬಡ್ಡಿ ದರಗಳೇನು? ಮತ್ತು ಅರ್ಹತೆಗಳೇನು? ಬೇಕಾಗುವ ದಾಖಲೆಗಳೇನು? ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ.
ಫೋನ್ ಪೇ ವೈಯಕ್ತಿಕ ಸಾಲ: (PhonePe Loan)
ನೀವೇನಾದರೂ ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ, ನೀವು 10,000 ದಿಂದ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಸಂಸ್ಕರಣ ಶುಲ್ಕವನ್ನು 2% ನಿಂದ 8% ವರೆಗೆ ವಿಧಿಸಲಾಗಬಹುದು ಎಂದು ತಿಳಿಸಲಾಗಿದೆ. ಸಾಲದ ಮಂಜೂರಾತಿ ಕ್ರಿಯೆಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಫೋನ್ ಪೇ ನಲ್ಲಿ ಸಾಲವನ್ನು ಪಡೆಯಲು ಬಯಸಿದರೆ ಪಾಲುದಾರಿಕೆ ಕಂಪನಿಗಳ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ ಉದಾಹರಣೆಗೆ ನೀವು ಮನಿ ವ್ಯೂ ಕಡೆಯಿಂದ ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ 15.96% ವರೆಗೆ ಬಡ್ಡಿಯನ್ನು ವಿಧಿಸಬಹುದಾಗಿದೆ. 2% ನಿಂದ 8% ವರೆಗೆ ಸಂಸ್ಕರಣ ಶುಲ್ಕವನ್ನು ವಿಧಿಸಬಹುದಾಗಿದೆ.
ಸಾಲಕ್ಕೆ ಅರ್ಹತೆಗಳು:
- ಭಾರತೀಯ ನಾಗರಿಕರು ಫೋನ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಸಾಲ ಪಡೆಯುವ ವ್ಯಕ್ತಿಯು ಕನಿಷ್ಠ 21 ವರ್ಷ ಮೇಲ್ಪಟ್ಟಿರಬೇಕು.
- KYC ಸಂಬಂಧಿತ ದಾಖಲೆಗಳನ್ನು ವ್ಯಕ್ತಿಯು ಹೊಂದಿರಬೇಕು.
- ಆಧಾರ್ ಸಂಖ್ಯೆಯೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.
- ನೀವು ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
- ಸಂಬಳ ಪಡೆಯುವ ವ್ಯಕ್ತಿಗಳು ಹಾಗೂ ಸ್ವಯಂ ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳು ಫೋನ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
- ವ್ಯಕ್ತಿಯು ಸಾಲವನ್ನು ಪಡೆಯಲು ಉತ್ತಮ CIBIL ಸ್ಕೋರ್ ಹೊಂದಿರುವುದು ಅವಶ್ಯಕ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಸ್ಟೇಟ್ ಮೆಂಟ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಸಂಬಳದ ಚೀಟಿ
- ಸೆಲ್ಫಿ ವೆರಿಫಿಕೇಶನ್
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ, ಪ್ಲೇ ಸ್ಟೋರ್ ನಿಂದ ಫೋನ್ ಪೇ ಅಪ್ಲಿಕೇಶನ್ ಪಡೆದುಕೊಂಡು, ಲಾಗಿನ್ ಆದ ನಂತರ ಕೆಳಗಡೆ ಮೆನು ಆಯ್ಕೆಗಳಲ್ಲಿ ಲೋನ್ ಎಂಬ ಆಯ್ಕೆ ಕಾಣಿಸುತ್ತದೆ. ಆ ಆಯ್ಕೆಯ ಮೇಲೆ ಮುಂದೆ ಸಾಗುವ ಮೂಲಕ ನೀವು ಯಾವ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬ ಆಯ್ಕೆಯ ನಂತರ ಸಾಲಕ್ಕೆ ಬೇಕಾಗುವ ದಾಖಲೆಗಳನ್ನು ಒದಗಿಸುವ ಮೂಲಕ, ಕೆವೈಸಿಯನ್ನು ಮಾಡಿದ ನಂತರ ಸಾಲದ ಅನುಮೋದನೆಯನ್ನು ನಿಮಗೆ ಮಾಡಲಾಗುತ್ತದೆ.