Jio Free Offer: ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿ! ದಿನಕ್ಕೆ ಕೇವಲ 12 ರೂ. ನಲ್ಲಿ ಪ್ರತಿದಿನ 2GB ಡೇಟಾ ಅನ್ಲಿಮಿಟೆಡ್ ಕರೆಗಳು!
ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ಜಿಯೋ ಗ್ರಾಹಕರಿಗೆ 1029 ರೂಪಾಯಿಯ ಒಂದು ಬೆಸ್ಟ್ ಆಫರ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮಗೆ ಯಾವೆಲ್ಲ ಪ್ರಯೋಜನಗಳು ದೊರಕಲಿವೆ? ಮತ್ತು ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಲು ಯಾರಿಗೆ ಸೂಕ್ತ? ಎಂಬುವುದನ್ನು ಈ ಲೇಖನದಲ್ಲಿ ಚರ್ಚಿಸೋಣ. ಆದ ಕಾರಣ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
ಸ್ನೇಹಿತರೆ, ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಹೊಂದಿರುವಂತಹ ಜಿಯೋ ಟೆಲಿಕಾಂ ಕಂಪನಿಯು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ಸೇವೆಗಳನ್ನು ಒದಗಿಸುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತದೆ. ಉತ್ತಮವಾದ ನೆಟ್ವರ್ಕ್ ಅವರೇಜನ್ನು ನೀವು ಜಿಯೋ ಕಂಪನಿಯ ಮೂಲಕ ಪಡೆಯಬಹುದಾಗಿರುತ್ತದೆ. ಹಾಗಾದರೆ ಜಿಯೋ ವತಿಯಿಂದಲೇ ಬಿಡುಗಡೆ ಮಾಡಿರುವ 1029 ರ ಪ್ಲಾನ್ ನಲ್ಲಿ ಯಾವೆಲ್ಲ ಲಾಭಗಳು ದೊರಕಲಿವೆ? ಇಲ್ಲಿದೆ ನೋಡಿ.
ಜಿಯೋ 1029 ರೂಪಾಯಿ ರಿಚಾರ್ಜ್ ಪ್ಲಾನ್: (Jio Free Offer)
ನೀವು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ 84 ದಿನಗಳ ಸುದೀರ್ಘವಾದ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಈ ಪ್ಲಾನ್ ನಲ್ಲಿ ಒಟ್ಟು 168GB ಡೇಟಾವನ್ನು ಪಡೆಯುತ್ತೀರಾ. ಅಂದರೆ, ಪ್ರತಿದಿನವೂ ಕೂಡ 2GB ಡೇಟಾವನ್ನು ನೀವು ಬಳಸಬಹುದಾಗಿರುತ್ತದೆ.
ಈ ಪ್ಲಾನ್ ಮುಖಾಂತರ ನೀವು 84 ದಿನಗಳವರೆಗೆ ಅನಿಯಮಿತ ಕರೆಗಳನ್ನು ಕೂಡ ಬಳಸಬಹುದಾಗಿರುತ್ತದೆ. ಹಾಗೂ ಪ್ರತಿದಿನವೂ ಕೂಡ 100 SMS ಗಳನ್ನು ಕೂಡ ಈ ಪ್ಲಾನ್ ಮುಖಾಂತರ ನೀವು ಪಡೆಯಬಹುದಾಗಿರುತ್ತದೆ. ಹಾಗೂ ಈ ಪ್ಲಾನ್ ಅವಧಿಯವರೆಗೂ ಅನಿಯಮಿತವಾಗಿ 5G ಡೇಟಾವನ್ನು ಕೂಡ ನೀವು ಬಳಸುವಂತಹ ಸೇವೆಯನ್ನು ಹೊಂದಿರುತ್ತೀರಾ.
ನೀವು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳುವುದರಿಂದ ಇದರ ಜೊತೆ ಜೊತೆಗೆ Amazon Prime Lite ಅನ್ನು ಪಡೆಯಬಹುದಾಗಿದೆ. ಮತ್ತು JioTv , JioCinema ಹಾಗೂ JioCloud ಸಬ್ಸ್ಕ್ರಿಪ್ಷನ್ ಅನ್ನು ಉಚಿತವಾಗಿ ಪಡೆಯಬಹುದಾಗಿರುತ್ತದೆ. ಅಮೆಜಾನ್ ಪ್ರೈಮ್ ಲೈಟ್ಸ್ ಸಬ್ಸ್ಕ್ರಿಪ್ಷನ್ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ಪಡೆದಿರುತ್ತದೆ.